ಎಲ್ಲ ನಟರ ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡಲು ಮುಂದಾಗಿ ದೊಡ್ಡ ಬಜೆಟ್ ಸಿನೆಮಾಗೆ ಕೈ ಹಾಕಿದ ದರ್ಶನ್ ಯಾವ ಸಿನಿಮಾ ಗೊತ್ತಾ??

8

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ರಾಬರ್ಟ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಇತಿಹಾಸವನ್ನು ಸೃಷ್ಟಿಸುವುದರಲ್ಲಿ ಯಶಸ್ವಿಯಾಗಿದೆ. ಅದೇ ಕಾರಣಕ್ಕಾಗಿ ಎಂದಿನಂತೆ ದರ್ಶನ್ ರವರ ಮುಂದಿನ ಸಿನಿಮಾದ ಕುರಿತು ಹೆಚ್ಚಿನ ನಿರೀಕ್ಷೆಗಳು ಇದ್ದು, ದರ್ಶನ್ ರವರ ಮುಂದೆ ಯಾವ ಸಿನಿಮಾ ಮಾಡುತ್ತಾರೆ ಎಂಬುದನ್ನು ತಿಳಿದು ಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ಕಾದು ನಿಂತಿದ್ದಾರೆ.

ಇಂತಹ ಸಂದರ್ಭದಲ್ಲಿ ಯುಗಾದಿ ಹಬ್ಬದ ದಿನದಂದು ದರ್ಶನ್ ಅವರು ತಮ್ಮ ಮುಂದಿನ ಚಿತ್ರದ ಕುರಿತು ಪ್ರಕಟಣೆ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು ಆದರೆ ಕಾರಣಾಂತರಗಳಿಂದ ಯುಗಾದಿ ಹಬ್ಬದ ದಿನದಂದು ಯಾವುದೇ ಅಧಿಕೃತ ಆದೇಶವನ್ನು ತಂಡ ಹೊರಡಿಸಲಿಲ್ಲ. ಇನ್ನು ಇದೀಗ ಕೊನೆಗೂ ದರ್ಶನ್ ರವರ 54ನೇ ಚಿತ್ರ ಯಾವುದು ಎಂಬುದು ತಿಳಿದುಬಂದಿದ್ದು, ಮತ್ತೊಮ್ಮೆ ಇತಿಹಾಸಗಳು ಸೃಷ್ಟಿಯಾಗುವ ಎಲ್ಲಾ ಸಾಧ್ಯತೆಗಳು ಇವೆ.

ಹೌದು ಸ್ನೇಹಿತರೇ ಮುಂದಿನ ದರ್ಶನ್ ರವರ ಸಿನಿಮಾ ಹೆಚ್ಚಿನ ಬಜೆಟ್ನಲ್ಲಿ ನಿರ್ಮಾಣವಾಗಲಿದ್ದು ಕನ್ನಡ ಚಿತ್ರರಂಗದಲ್ಲಿಯೇ ಅತಿ ಹೆಚ್ಚು ಬಜೆಟ್ ಹಾಕಲಾಗುತ್ತದೆ ಎಂಬ ಮಾಹಿತಿ ತಿಳಿದು ಬಂದಿದೆ, ಹಲವಾರು ತಿಂಗಳುಗಳಿಂದ ಕಾದಿರಿಸಿದ್ದ ವೀರ ಮದಕರಿ ನಾಯಕ ಚಿತ್ರವನ್ನು ದರ್ಶನ್ ರವರು ಮುಗಿಸಲು ನಿರ್ಧಾರ ಮಾಡಲಾಗಿದ್ದು, ರಾಕ್ ಲೈನ್ ವೆಂಕಟೇಶ್ ರವರು ರಾಜ ವೀರ ಮದಕರಿ ನಾಯಕನ ಚಿತ್ರಕ್ಕೆ ಹೂಡಿಕೆ ಮಾಡಲಿದ್ದಾರೆ ಎಂಬುದು ತಿಳಿದು ಬಂದಿದೆ. ಸಾಮಾನ್ಯವಾಗಿಯೇ ಕಡಿಮೆ ಬಜೆಟ್ ನಲ್ಲಿ ಮಾಡಿದರು ಇತಿಹಾಸ ಸೃಷ್ಟಿಸುವಂತಹ ಸಿನಿಮಾಗಳನ್ನು ಮಾಡುವ ದರ್ಶನ್ ರವರು ಈ ಚಿತ್ರದ ಮೂಲಕ ಕನ್ನಡದ ಎಲ್ಲಾ ಸಿನಿಮಾಗಳ ದಾಖಲೆಯನ್ನು ಮತ್ತೊಮ್ಮೆ ಕುಟ್ಟಿ ಕುಟ್ಟಿ ಪುಡಿ ಮಾಡಿದರೆ ಯಾವುದೇ ಅಚ್ಚರಿಪಡಬೇಕಾಗಿಲ್ಲ ಏನಂತೀರಿ.

Get real time updates directly on you device, subscribe now.