ವಯಸ್ಸಿಗೂ ಮೀರಿದ ಪಾತ್ರಗಳನ್ನು ಮಾಡಿರುವ ರಶ್ಮಿ ರವರು ಎಷ್ಟು ಚಿಕ್ಕವರು ಗೊತ್ತೇ?? ಇವರ ನಿಜವಾದ ವಯಸ್ಸೆಷ್ಟು ಗೊತ್ತೇ??

6

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಲಕ್ಷ್ಮಿ ಬಾರಮ್ಮ ಧಾರವಾಹಿ ಕನ್ನಡದ ಖ್ಯಾತ ಧಾರವಾಹಿಗಳಲ್ಲಿ ಸ್ಥಾನ ಪಡೆದು ಕೊಂಡಿದ್ದ ಧಾರವಾಹಿಲ್ಲಿ ಒಂದು. ಹಲವಾರು ವರ್ಷಗಳ ಕಾಲ ಟಿಆರ್ಪಿ ಲಿಸ್ಟಿನಲ್ಲಿ ಉತ್ತಮ ಸಾಧನೆ ಮಾಡುತ್ತಾ, ಬಹಳ ಅದ್ಭುತವಾಗಿ ಮೂಡಿ ಬಂದು, ವರ್ಷಗಳು ಕಳೆದರೂ ಕೂಡ ಪ್ರೇಕ್ಷಕರನ್ನು ತನ್ನಲ್ಲೆ ಉಳಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಹೀಗೆ ಬಾರಿ ಜನಪ್ರಿಯತೆಯನ್ನು ಪಡೆದು ಕೊಂಡ ಧಾರವಾಹಿ ಲಕ್ಷ್ಮೀ ಬಾರಮ್ಮ ದಲ್ಲಿ ಚಿನ್ನು ಪಾತ್ರ ಮಾಡಿದ ಕವಿತ ಗೌಡ ರವರು ಬಾರಿ ಜನಪ್ರಿಯತೆ ಪಡೆದು ಕೊಂಡರು. ಅದೇ ಸಮಯದಲ್ಲಿ ಕವಿತಾ ಗೌಡ ರವರು ಧಾರವಾಹಿಯಿಂದ ಕಾರಣಾಂತರಗಳಿಂದ ದೂರ ಉಳಿದಾಗ ರಶ್ಮಿ ಪ್ರಭಾಕರ್ ರವರು ಧಾರವಾಹಿ ಸೇರಿಕೊಂಡರು.

ಕವಿತಾ ಗೌಡ ರವರಿಗೆ ಭಾರೀ ಜನಪ್ರಿಯತೆಯನ್ನು ನೀಡಿದ್ದ ಈ ಚಿನ್ನು ಪಾತ್ರ ನಿರ್ವಹಣೆ ಮಾಡುವುದು ಸುಲಭದ ಕೆಲಸವಾಗಿರಲಿಲ್ಲ ಯಾಕೆಂದರೆ ಪ್ರೇಕ್ಷಕರು ಬಹಳ ನಿರೀಕ್ಷೆಯನ್ನು ಈ ಪಾತ್ರದ ಮೇಲೆ ಇಟ್ಟು ಕೊಂಡಿದ್ದರು. ಪ್ರೇಕ್ಷಕರ ನಿರೀಕ್ಷೆಗಿಂತ ಹೆಚ್ಚಿನ ರೀತಿಯಲ್ಲಿ ನಟನೆ ಮಾಡುವ ಮೂಲಕ ರಶ್ಮಿ ಪ್ರಭಾಕರ್ ಅವರು ನಿಜಕ್ಕೂ ತಮಗೆ ನೀಡಿದ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಗೃಹಿಣಿ ಪಾತ್ರ ಸಿಕ್ಕರೂ ಕೂಡ ಬಹಳ ಅದ್ಭುತವಾಗಿ ಮಾಡಿ ಮುಗಿಸಿದ್ದರು, ಹೀಗೆ ಗೃಹಿಣಿ ಪಾತ್ರದಲ್ಲಿ ನೋಡಿದ ಕಾರಣಕ್ಕಾಗಿ ರಶ್ಮಿ ಪ್ರಭಾಕರ್ ರವರಿಗೆ ಎಲ್ಲರೂ ವಯಸ್ಸಾಗಿದೆ ಎಂದು ಕೊಳ್ಳುತ್ತಾರೆ ಆದರೆ ಇವರ ವಯಸ್ಸು ಇದೀಗ ಕೇವಲ 28.

Get real time updates directly on you device, subscribe now.